×
  • ಆಪ್ ಡೌನ್‌ಲೋಡ್ ಮಾಡಿ

ನಿಮ್ಮ ಪಾರ್ಟಿ ಮೆನುಗಾಗಿ 13 ಆರೋಗ್ಯಕರ ಸ್ನ್ಯಾಕ್ಸ್‌ಗಳು (13 Healthy Snacks For Your Party Menu)

ನಿಮ್ಮ ಪಾರ್ಟಿ ಮೆನುಗಾಗಿ 13 ಆರೋಗ್ಯಕರ ಸ್ನ್ಯಾಕ್ಸ್‌ಗಳು (13 Healthy Snacks For Your Party Menu)

ಅರೆ ವರ್ಷದಲ್ಲಿ ಒಂದು ಹೋದರೆ ಮತ್ತೊಂದು ಬರುತ್ತದೆ ಆಚರಣೆಗಳು!. ಹುಟ್ಟಿದ ಹಬ್ಬ ಮಾಡಿ ಮುಗಿಸುವುದರೊಳಗೆ, ಮತ್ತೊಂದು ಹುಟ್ಟು ಹಬ್ಬ ಬರುತ್ತದೆ. ಆ ಹಬ್ಬ ಮಾಡಿ ಮರೆಯುವುದರೊಳಗೆ ಕೆಲಸದಲ್ಲಿ ಬಡ್ತಿ, ಸ್ನೇಹಿತರು ಪಾರ್ಟಿ ಇಲ್ಲವೇನಮ್ಮಾ ಎನ್ನುತ್ತಾರೆ. ಅವರಿಗಾಗಿ ಒಂದು ಪಾರ್ಟಿ ನೀಡಲೇಬೇಕು. ಹೀಗೆ ನಾವು ಪಾರ್ಟಿ ಮಾಡಿಕೊಳ್ಳುವ ಜಮಾನದಲ್ಲಿದ್ದೇವೆ. ಹಾಗೆಂದು ಪಾರ್ಟಿಯಲ್ಲಿ ಅದು ಇದು ನೀಡಿ ನಿಮ್ಮ ಮತ್ತು ಅತಿಥಿಗಳ ಆರೋಗ್ಯವನ್ನು ಹಾಳು ಮಾಡುವ ಬದಲಿಗೆ, ಆರೋಗ್ಯಕರವಾದ ಸ್ನ್ಯಾಕ್ಸ್‌ಗಳನ್ನು ನೀಡಿ ಎಲ್ಲರ ಆರೋಗ್ಯವನ್ನು ಕಾಪಾಡುವ ಒಳ್ಳೆಯ ಕೆಲಸ ಮಾಡಬಹುದಲ್ಲವೇ? ಹೇಗೆ ಎಂದಿರಾ,, ಮುಂದೆ ಓದಿ…

ಹಮ್ಮಸ್ ಜೊತೆಗೆ ವೆಜ್ಜಿ ಸ್ಟಿಕ್‌ಗಳು (Veggie sticks with hummus)

ತಟ್ಟೆಯಲ್ಲಿ ನೋಡಿದ ಕೂಡಲೆ ವಾವ್ ಎಂದು ಇದರ ಸೌಂದರ್ಯವನ್ನು ವರ್ಣಿಸುತ್ತಾರೆ ಅತಿಥಿಗಳು!. ಇದಕ್ಕಾಗಿ ಕ್ಯಾರಟ್, ಸೌತೆಕಾಯಿ ಮತ್ತು ಕೆಂಪು ಮೆಣಸಿನ ಸ್ಟಿಕ್ಗಳನ್ನು ಸ್ಕ್ವಾಟ್ ವಿಸ್ಕಿ ಜೊತೆಗೆ ನೀಡಿ. ಆಗ ನೋಡಿ ನಿಮ್ಮ ಅತಿಥಿಗಳು ನಿಮ್ಮನ್ನು ಪಾರ್ಟಿಯಲ್ಲಿ ಹಾಡಿ ಹೊಗಳುತ್ತಾರೆ.

ಸ್ಟಿಕ್ ಮೇಲೆ ಹಣ್ಣು (Fruit on a stick)

ಸ್ಟ್ರಾಬೆರ್ರಿ, ದ್ರಾಕ್ಷಿ, ಕಿತ್ತಳೆ, ಸೇಬು, ಪಿಯರ್ಸ್ ಮತ್ತು ಬಾಳೆಹಣ್ಣುಗಳು ಒಂದು ಕಡ್ಡಿಯಲ್ಲಿ ಚಿತ್ರದಲ್ಲಿ ತೋರಿಸುವಂತೆ ಚುಚ್ಚಿ ಇಡಿ. ಇದನ್ನು ಇನ್ನೂ  ಚೆನ್ನಾಗಿ ಮಾಡಲು ಮೆಲನ್ ಬಾಲರ್ ಅನ್ನು ಬಳಸಿ ಹಣ್ಣುಗಳಿಗೆ ಒಂದು ಆಕಾರ ನೀಡಿ, ಆಮೇಲೆ ಚುಚ್ಚಿ. ನಂತರ ಸ್ವಲ್ಪ ಹೊತ್ತು ಫ್ರಿಡ್ಜ್‌ನಲ್ಲಿಡಿ, ನಂತರ ನಿಂಬೆ ಮತ್ತು ಉಪ್ಪನ್ನು ಇದರ ಮೇಲೆ ಚಿಮುಕಿಸಿ ತಿನ್ನಲು ನೀಡಿ.

ಯೋಗರ್ಟ್ ಕಪ್‌ಗಳು (Yoghurt cups)

ಹಣ್ಣಿನ ಫ್ಲೇವರ್ ಇರುವ ಯೋಗರ್ಟ್ ತೆಗೆದುಕೊಂಡು ಅದಕ್ಕೆ ಕೆಲವೊಂದು ಬೆರ್ರಿಗಳನ್ನು ಬೆರೆಸಿಕೊಳ್ಳಿ. ಇದು ಅತ್ಯುತ್ತಮವಾದ ಡೆಸರ್ಟ್‌ಗಳಾಗಿ ನಿಮ್ಮ ಅತಿಥಿಗಳಿಗೆ ಮುದ ನೀಡುತ್ತದೆ. ಇದನ್ನು ಸಣ್ಣ ಪ್ಲಾಸ್ಟಿಕ್ ವೈನ್ ಅಥವಾ ಮೌಸ್ಸೆ ಗ್ಲಾಸ್‌ಗಳಲ್ಲಿ ಅತಿಥಿಗಳಿಗೆ ನೀಡಿ. ಮಕ್ಕಳು ನಿಮ್ಮ ಅತಿಥಿಗಳ ಜೊತೆಗೆ ಬಂದಿದ್ದಲ್ಲಿ, ಇದನ್ನು ಪ್ರಾಣಿಗಳ ಆಕಾರದಲ್ಲಿರುವ ಬಟ್ಟಲುಗಳಲ್ಲಿ ಸೇವಿಸಲು ನೀಡಿ.

ಡೆವಿಲ್ಡ್ ಎಗ್ಸ್ (Devilled eggs)

ಡೆವಿಲ್ಡ್ ಎಗ್ಸ್ ಪಾರ್ಟಿಗಳಲ್ಲಿ ಬಳಸಬಹುದಾದ ಅತ್ಯುತ್ತಮ ಆರೋಗ್ಯಕರ ಖಾದ್ಯವಾಗಿರುತ್ತದೆ. ಇದರ ಅಂದವನ್ನು ಹೆಚ್ಚಿಸಲು ಸ್ವಲ್ಪ ಮೆಣಸಿನ ಪುಡಿಯನ್ನು ಚಿಮುಕಿಸಿ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ. ನಿಮಗೆ ಮತ್ತಷ್ಟು ಸೃಜನಶೀಲತೆ ಅಗತ್ಯವಿದ್ದಲ್ಲಿ, ಮೊಟ್ಟೆಯ ಲೋಳೆಯ ಮೇಲೆ ಕನ್ಫೆಕ್ಷನರಿ ಕೋನ್ ಮೂಲಕ ಪೈಪಿಂಗ್ ಮಾಡಿ, ಪ್ರತಿಯೊಂದಕ್ಕು ವೈವಿಧ್ಯಮಯ ಟಾಪಿಂಗ್ ಮಾಡಿ.

ಸಲ್ಸಾ ಅಥವಾ ಗುವಾಸ್ಕ್ ಮತ್ತು ಚಿಪ್ಸ್ (Salsa or guac and chips)

ಗುವಕಮೊಲ್ ಮತ್ತು ಸಲ್ಸಾ ಜೊತೆಗೆ ಸ್ವಲ್ಪ ರೋಸ್ಟ್ ಮಾಡಿದ ಚಿಪ್ಸ್‌ಗಳನ್ನು ನೀಡಿ, ಇದು ನಿಮ್ಮ ಅತಿಥಿಗಳಿಗೆ ನಿಜಕ್ಕೂ ಇಷ್ಟವಾಗುತ್ತದೆ. ಇದನ್ನು ತಿನ್ನಲು ಕುರುಮ್ ಕುರುಮ್ ಎಂದು ಇರುತ್ತದೆಯಾದ್ದರಿಂದ, ಎಲ್ಲರಿಗೂ ಇಷ್ಟವಾಗುತ್ತದೆ.

ಪೈನಾಪಲ್ ಚೀಸ್ (Pineapple and cheese)

ಪೈನಾಪಲ್ ಅಥವಾ ಅನಾನಸ್ ಕ್ಯೂಬ್‌ಗಳನ್ನು ಟೂಥ್‌ಪಿಕ್‌ಗಳ ಜೊತೆಗೆ ಸೇವಿಸಿ. ಇದಕ್ಕಾಗಿ ಅಲಂಕಾರಿಕ ಟೂಥ್‌ಪಿಕ್‌ಗಳನ್ನು ತಂದರೆ ಇನ್ನೂ ಒಳ್ಳೆಯದು.

ಚಾಕೋಲೆಟ್-ಕೋಟೇಡ್ ಸ್ಟಾಬೆರ್ರಿಗಳು (Chocolate-coated strawberries)

ಆರೋಗ್ಯದ ಜೊತೆಗೆ ಅತ್ಯಂತ ರುಚಿಕರ ತಿಂಡಿಯನ್ನು ಪ್ರಯತ್ನಿಸಬೇಕು ಎಂದರೆ ಇದಕ್ಕಿಂತ ಮತ್ತೊಂದಿಲ್ಲ. ಇದಕ್ಕಾಗಿ ಫ್ರೋಜನ್ ಸ್ಟ್ರಾಬೆರ್ರಿಗಳನ್ನು ಮತ್ತು ಬಾಳೆಹಣ್ಣುಗಳನ್ನು ತೆಗೆದುಕೊಂಡು ಹಾಟ್ ಚಾಕೋಲೇಟ್ ಸಿರಪ್‌ನಲ್ಲಿ ಅದ್ದಿ, ನಂತರ ಅವುಗಳನ್ನು ಒಣಗಲು ಬಿಡಿ. ಟೂಥ್‌ಪಿಕ್‌ಗಳ ಜೊತೆಗೆ ಇದನ್ನು ಸವಿಯಲು ನೀಡಿ.

‌ರ‍್ಯಾಪ್‌ಗಳು (Wraps)

ಹಲವಾರು ಆರೋಗ್ಯಕರ ಆಹಾರ ಪದಾರ್ಥಗಳನ್ನು ಸೇರಿಸಿ, ಒಂದು ಆರೋಗ್ಯಕರ ವ್ರ್ಯಾಪ್ ಮಾಡಿ. ಎಲೆ ಕೋಸು, ಬಟಾಣಿ, ಕ್ಯಾರಟ್, ಬ್ರೊಕ್ಕೊಲಿ ಮತ್ತು ಎಲ್ಲಾ ಬಗೆಯ ಆಲೂಗಡ್ಡೆಗಳನ್ನು ಸೇರಿಸಿ ಒಂದು ವ್ರ್ಯಾಪ್ ಮಾಡಿ. ಇದನ್ನು ಆಲೀವ್ ಎಣ್ಣೆಯನ್ನು ಸೇರಿಸಿಕೊಂಡು ಸ್ವಲ್ಪ ಫ್ರೈ ಮಾಡಿ. ಆಮೇಲೆ ಇದನ್ನು ಟೊರ್ಟಿಲ್ಲ ರ‍್ಯಾಪ್‌ಗಳಲ್ಲಿ ಸುತ್ತಿ. ಇದನ್ನು ಅಥಿತಿಗಳು ಸೇವಿಸಲು ಸುಲಭವಾಗಿ ಸಣ್ಣ ಸಣ್ಣ ಭಾಗಗಳನ್ನಾಗಿ ಮಾಡಿ.

ಬ್ರುಶ್ಶೆಟ್ಟ (Bruschetta)

ಇದು ಒಂದು ಅತ್ಯುತ್ತಮ ಅಪ್ಪೆಟೈಜರ್ ಜೊತೆಗೆ ಆರೋಗ್ಯಕರವು ಸಹ. ಒಂದು ಒಳ್ಳೆಯ ಗಾರ್ಲಿಕ್ ಬ್ರೆಡ್ ತೆಗೆದುಕೊಂಡು, ನಾವು ಸೇವಿಸಲು ಸುಲಭವಾಗುವ ಮಟ್ಟಿಗೆ ಕತ್ತರಿಸಿಕೊಳ್ಳಿ, ಪಾನೀಪೂರಿಯಷ್ಟು ಅಗಲದ್ದು!. ಇದರ ಮೇಲೆ ಸ್ವಲ್ಪ ಆಲೀವ್ ಎಣ್ಣೆಯನ್ನು ಚಿಮುಕಿಸಿ, ಅದನ್ನು ಓವೆನ್‌ನಲ್ಲಿ 5 ನಿಮಿಷಗಳ ಕಾಲ ಬಿಸಿ ಮಾಡಿ ಅಥವಾ ಕಡಿಮೆ ಉರಿಯಲ್ಲಿ ಇದನ್ನು ಡ್ರೈ ಟೋಸ್ಟ್ ಮಾಡಿ. ಇದರ ಮೇಲೆ ಕತ್ತರಿಸಿದ ಟೊಮಾಟೊ, ಕಬ್ಬಿಣಾಂಶ, ಕ್ಯಾಪ್ಸಿಕಂ ಇಡಿ. ಉಪ್ಪು ಮತ್ತು ಕರಿಮೆಣಸನ್ನು ಚಿಮುಕಿಸಿ, ಅದರ ಮೇಲೆ ಒಂದು ತುಳಸಿ ಎಲೆಯನ್ನು ಇಟ್ಟು ಸವಿಯಲು ನೀಡಿ.

ಶ್ರಿಂಪ್ ಕಾಕ್ಟೇಲ್ (Shrimp cocktail)

ಇದನ್ನು ನೀವು ಇನ್ನೂ ಪ್ರಯತ್ನಿಸಿ ನೋಡಲಿಲ್ಲವಾದಲ್ಲಿ, ಪ್ರಯತ್ನಿಸಲು ಇದು ಸಕಾಲ. ಸುಂದರವಾದ ಕಾಕ್ಟೇಲ್ ಲೋಟಗಳಲ್ಲಿ, ಪ್ರೋಟೀನ್ಭರಿತವಾಗಿರುವ ಶ್ರಿಂಪ್ ಹೇಗಿರುತ್ತದೆ ಊಹಿಸಿ. ಇದರಲ್ಲಿ ಕೊಬ್ಬು ಮತ್ತು ಕ್ಯಾಲೋರಿಗಳು ಕಡಿಮೆಯಿರುವುದು ಇನ್ನೂ ಒಳ್ಳೆಯದು. ಇದರ ಆರೋಗ್ಯವನ್ನು ಕಾಪಾಡಲು, ಬಾಟಲಿಯಲ್ಲಿರುವ ಸಾಸ್ಗಳನ್ನು ಇದಕ್ಕೆ ಬೆರೆಸಬೇಡಿ.

ಸುಶಿ (Sushi)

ಇದು ಅನ್ನವನ್ನು ಒಳಗೊಂಡಿರುತ್ತದೆಯೆಂದು ಇದನ್ನು ತಾತ್ಸಾರ ಮಾಡಬೇಡಿ. ಅನ್ನದಲ್ಲಿರುವ ಸ್ಟಾರ್ಚ್ ಇದರೊಳಗೆ ಇರುವ ಬೇಯಿಸಿದ ಪದಾರ್ಥಗಳಿಂದ ಮತ್ತಷ್ಟು ಆರೋಗ್ಯವನ್ನು ನೀಡುತ್ತದೆ. ಅದರಲ್ಲೂ ಈ ಖಾದ್ಯದಲ್ಲಿರುವ ಮೀನು  ಈ ಸ್ನ್ಯಾಕ್ ಅನ್ನು ಮತ್ತಷ್ಟು ಆರೋಗ್ಯಕರವನ್ನಾಗಿ ಮಾಡುತ್ತದೆ. ಹೀಗಾಗಿ ಇದು ನಿಮ್ಮ ಪಾರ್ಟಿಗೆ ಹೇಳಿ ಮಾಡಿಸಿದ ಸ್ನ್ಯಾಕ್ಸ್ ಆಗಿರುತ್ತದೆ.

ಮಿನಿ ಇಡ್ಲಿಗಳು (Mini idlis)

ನಿಮ್ಮ ಪಾರ್ಟಿಗೆ ಭಾರತೀಯತೆ ಬೇಕಾ? ಹಾಗಾದರೆ ಇಡ್ಲಿಗಳನ್ನು ಬಡಿಸಿ. ಆ ಇಡ್ಲಿಗಳ ಮೇಲೆ ಚಿಟಿಕೆಯಷ್ಟು ಅರಿಶಿನವನ್ನು ಉದುರಿಸಿ ನೀಡಿ. ತಾಜಾ ಚಟ್ನಿ ಜೊತೆಗೆ ನಿಮ್ಮ ಅತಿಥಿಗಳು ಇದನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ!

ಪರೋಟಾ ಟ್ರೈಯಾಂಗಲ್ (Paratha triangles)

ಕಡಿಮೆ-ಕೊಬ್ಬಿನಂಶವಿರುವ ಪನೀರ್ ಅಥವಾ ಸೋಯಾ ಕೀಮಾವು ಪರೋಟಾಗಳಿಗೆ ಹೇಳಿ ಮಾಡಿಸಿದ ಹೂರಣವಾಗಿರುತ್ತದೆ. ಎಣ್ಣೆ ಮತ್ತು ತುಪ್ಪವನ್ನು ಕಡಿಮೆ ಬಳಸಿದಷ್ಟು ಇದು ಆರೋಗ್ಯಕರವಾಗಿರುತ್ತದೆ. ಕೆಚಪ್ ಅಥವಾ ಪುದಿನಾ ಚಟ್ನಿ ಜೊತೆಗೆ ಇದನ್ನು ಬಡಿಸಿ!

ಹಕ್ಕುತ್ಯಾಗ: ಈ ಅಂಕಣದಲ್ಲಿ ನೀಡಲಾಗಿರುವ ವೈದ್ಯಕೀಯ ಮಾಹಿತಿಯು ಕೇವಲ ಮಾಹಿತಿಗಾಗಿ ಮಾತ್ರ ನೀಡಲಾಗಿದೆ. ಇದರಲ್ಲಿರುವ ಮಾಹಿತಿಯನ್ನು ಯಾವುದಾದರು ಒಂದು ವೈದ್ಯಕೀಯ ಸ್ಥಿತಿಗೆ ಅಥವಾ ಆರೋಗ್ಯ ಸೇವೆಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ದಯವಿಟ್ಟು ನಿಮ್ಮ ವೈದ್ಯರನ್ನು ಅಥವಾ ಆರೋಗ್ಯ ಸೇವೆ ಒದಗಿಸುವವರನ್ನು ಸಂಪರ್ಕಿಸಿ.

Consult a top Dietitian/Nutritionist

Copyright © 2017 Modasta. All rights reserved

ಉಲ್ಲೇಖಗಳು

0
Email this to someoneShare on LinkedInTweet about this on TwitterShare on Google+Share on Facebook

Related Articles

More On This Category